ಬಂಕಾಪುರ, ಪಿ ಎಲ್
	( -2003). ಪತ್ರಿಕೋದ್ಯಮ ಈಗಲೂ ಹೂವಿನ ಹಾದಿಯೇನೂ ಅಲ್ಲ. ಆದರೆ ದಶಕಗಳ ಹಿಂದೆ ಇದ್ದಂತೆ ಬರೀ ಮುಳ್ಳೇ ತುಂಬಿದ ಮಾರ್ಗವೂ ಅಲ್ಲ. ಅದು ಬರೀ ಮುಳ್ಳು ಕಲ್ಲಿನ ದಾರಿ ಮಾತ್ರವಾಗಿದ್ದ ಕಾಲದಲ್ಲೂ ಅಲ್ಲೂ ಹೆಜ್ಜೆ ಹಾಕುತ್ತೇನೆಂದು ಹಟ ಹಿಡಿದ ಕೆಲವರಿಗೆ ಮೌಲ್ಯ ಬದುಕಾಗಿತ್ತು. ಅಂಥದೊಂದು ಮೌಲ್ಯದ ಹುಡುಕಾಟದಲ್ಲಿ ಕಲ್ಲು ಮುಳ್ಳಿನ ಈ ದಾರಿಗೆ ಬಂದವರು ಪ.ಲೋ.ಬಂಕಾಪುರ.

	ಸ್ವಾತಂತ್ರ್ಯಪೂರ್ವದ ದಿನಗಳಿಂದಲೂ ಪತ್ರಿಕೋದ್ಯಮವನ್ನು ಒಂದು ತಪಸ್ಸು ಎಂದೇ ಸ್ವೀಕರಿಸಿ, ತಮ್ಮ ತೀಕ್ಷ್ಣ ಲೇಖನಿಯಿಂದ ಸುದೀರ್ಘ ಕಾಲದವರೆಗೆ ಸಮಾಜಕ್ಕೆ ಚುರುಕು ಮುಟ್ಟಿಸಿದ ಈ ಹಿರಿಯ ಚೇತನ ಸಾಗಿದ ಹಾದಿ, ಮಾಡಿರುವ ಸಾಧನೆ ಅಪಾರ. ಕರ್ನಾಟಕ ಬಂಧು, ಕರ್ಮವೀರ, ಉಷಾ, ಸ್ವತಂತ್ರ, ವಿಶಾಲಕರ್ನಾಟಕ, ಪ್ರಪಂಚ, ನವಯುಗ, ಪ್ರಜಾಪ್ರಭುತ್ವ-ದೈನಿಕ, ನಿಯತಕಾಲಿಕಗಳು ಬಂಕಾಪುರ ಕಾರ್ಯನಿರ್ವಹಿಸಿದ ಪ್ರಕಟಣೆಗಳು. ಈ ಪೈಕಿ ವಿಶಾಲ ಕರ್ನಾಟಕ ಪತ್ರಿಕೆಗೆ ಕೆಲಕಾಲ ಅವರು ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದರು.

	ಆದರೆ ಅವರ ತುಡಿತವೇ ಬೇರೆ. ಸೃಜನಶೀಲ ಮನಸ್ಸು ಸದಾಕಾಲವೂ ಚಡಪಡಿಕೆಯ ಗೂಡಾಗಿರುತ್ತದೆ ಎನ್ನುವಂತೆ ಅವರು ಇತರರ ಪತ್ರಿಕೆಗಳಲ್ಲಿ ಕಾಣಲಾಗದ ವೃತ್ತಿ ಸಮಾಧಾನವನ್ನು ಕಂಡುಕೊಳ್ಳಲು ಸ್ವಂತ ಪ್ರಕಾಶನಕ್ಕೆ ಕೈ ಹಾಕಿದರು.

	ನಮಗೆ ಸ್ವಾತಂತ್ರ್ಯ ಬಂದುದು 1947ರಲ್ಲಿ. ಅದೇ ವರ್ಷ ಬಂಕಾಪುರರು ಗರ್ಜನೆ ಎಂಬ ಕನ್ನಡ ಮಾಸಿಕವನ್ನು ಆರಂಭಿಸಿದರು. ಮುದವೀಡು ಕೃಷ್ಣರಾಯರು, ಅ.ನ.ಕೃಷ್ಣರಾಯರು, ಬೀಚಿ, ಬೆಟಗೇರಿ ಕೃಷ್ಣಶರ್ಮ, ಶ್ರೀರಂಗ, ಚನ್ನವೀರ ಕಣವಿ, ಎಸ್.ಎಸ್.ಒಡೆಯರ್ ಮುಂತಾದವರು ಗರ್ಜನೆಯಲ್ಲಿ ನಿಯಮಿತವಾಗಿ ಬರೆಯುತ್ತಿದ್ದರು ಎನ್ನುವುದು ಬಂಕಾಪುರ ಅವರಿಗಿದ್ದ ಸಾಹಿತ್ಯ ಸಂಬಂಧದ ಅಗಲ-ಆಳಕ್ಕೆ ನಿದರ್ಶನ. 	ಕನ್ನಡಿಗರ ದುರ್ದೈವ. ಗರ್ಜನೆ ಎರಡೇ ವರ್ಷದಲ್ಲಿ ಉಡುಗಿಹೋಯಿತು. ಬಂಕಾಪುರರು ಇದರಿಂದೇನೂ ಧೃತಿಗೆಡಲಿಲ್ಲ. ಸಿಡಿಲು ದೈನಿಕ ಆರಂಭಿಸಿದರು. ರಂಜನೆ ಸಾಪ್ತಾಹಿಕ, ಅವರ ಮತ್ತೊಂದು ಕೊಡುಗೆ. ಐವತ್ತರ ದಶಕ ಇಪ್ಪತ್ತನೆ ಶತಮಾನದ ಭಾಷೆ ಎಂದೇ ಕರೆಸಿಕೊಂಡ ಸಿನಿಮಾ ಮಾಧ್ಯಮ ಹುರುಪುಗೊಳ್ಳುತ್ತಿದ್ದ ದಿನಮಾನವದು. ನಾಗರಿಕ ಸಮಾಜದ ಅವಿಭಾಜ್ಯ ಅಂಗವಾಗಿ ಬೆಳೆಯುತ್ತಿದ್ದ ಸಿನಿಮಾ ಕುರಿತು ವಸ್ತುನಿಷ್ಠ ಮಾಹಿತಿ ನೀಡುವ ಉದ್ದೇಶದ ಚಿತ್ರಾ ಸಿನಿಮಾ ಮಾಸಿಕವನ್ನು ಬಂಕಾಪುರ 1952ರಲ್ಲಿ ಆರಂಭಿಸಿದರು. ಗದಗ ಹಾಗೂ ಮುಂಬೈನಿಂದ ಏಕಕಾಲಕ್ಕೆ ಪ್ರಕಟವಾಗುತ್ತಿದ್ದ ಇದು ಸಿನಿಮಾ ವರದಿಯ ಹೊಸ ಆಯಾಮವೊಂದರ ಉದಯಕ್ಕೆ ವೇದಿಕೆಯಾಯಿತು. ಪ್ರಾರಬ್ಧ, ನೇಕಾರಿಕೆ, ಸರ್ವಜ್ಞ ಎಂಬ ಪತ್ರಿಕೆಗಳನ್ನೂ ಬಂಕಾಪುರ ಆರಂಭಿಸಿದರು. ಈ ಎಲ್ಲದರ ಪ್ರತಿಫಲವಾಗಿ ಅವರಿಗೆ ಸಿಕ್ಕಿದ್ದು ಬಡತನ. ಆದರೆ ಪತ್ರಿಕೋದ್ಯಮವನ್ನು ಆದಾಯ ಮೂಲ ಎಂದು ಎಂದೂ ಭಾವಿಸದ ಬಂಕಾಪುರರು ಇತರರು ಅನುಸರಿಸಲು ಕಷ್ಟವಾದ ದುರ್ಗಮ ಪಥವನ್ನೇ, ಉದ್ದಕ್ಕೂ ತುಳಿದವರು. ಕರ್ನಾಟಕ ಸರಕಾರ ರಾಜ್ಯೋತ್ಸವ ಪ್ರಶಸ್ತಿ (1973), ಪತ್ರಿಕೋದ್ಯಮ ಪ್ರಶಸ್ತಿ (1993) ಮತ್ತು ಟೀಯೆಸ್ಸಾರ್ ಪ್ರಶಸ್ತಿ (1996) ನೀಡಿ ಗೌರವಿಸಿದೆ. ಬಂಕಾಪುರ ಅವರು 2003ರ ಜನವರಿ 5ರಂದು ನಿಧನ ಹೊಂದಿದರು.									(ಎಂ.ಕೆ.ಬಿ)

ಬಂಕಾಪುರ, ಪಿ ಎಲ್

	(1918-2003). 1918ರ ಅಕ್ಟೋಬರ್ 13ರಂದು ಗದಗದಲ್ಲಿ ಜನಿಸಿದ ಪ.ಲೋ. ಬಂಕಾಪುರ ಅವರ ಅನುಭವದ ಹರವು ದೊಡ್ಡದು. 1996ರ ಸಾಲಿನ ಟೀಯೆಸ್ಸಾರ್ ಪ್ರಶಸ್ತಿ ಪುರಸ್ಕøತ ಪರ್ವತಪ್ಪ ಲೋಕಪ್ಪ ಬಂಕಾಪುರ ಸ್ವಂತ ಪರಿಶ್ರಮದಿಂದ ಬೆಳೆದರು. ಪತ್ರಿಕೋದ್ಯಮ ಈಗಲೂ ಹೂವಿನ ಹಾದಿಯೇನೂ ಅಲ್ಲ. ಆದರೆ ದಶಕಗಳ ಹಿಂದೆ ಇದ್ದಂತೆ ಬರೀ ಮುಳ್ಳೇ ತುಂಬಿದ ಮಾರ್ಗವೂ ಅಲ್ಲ. ಅದು ಬರೀ ಮುಳ್ಳು ಕಲ್ಲಿನ ದಾರಿ ಮಾತ್ರವಾಗಿದ್ದ ಕಾಲದಲ್ಲೂ ಅಲ್ಲೆ ಹೆಜ್ಜೆ ಹಾಕುತ್ತೇನೆಂದು ಹಟ ಹಿಡಿದ ಕೆಲವರಿಗೆ ಮೌಲ್ಯ ಬದುಕಾಗಿತ್ತು. ಅಂಥದೊಂದು ಮೌಲ್ಯದ ಹುಡುಕಾಟದಲ್ಲಿ ಕಲ್ಲು ಮುಳ್ಳಿನ ಈ ದಾರಿಗೆ ಬಂದವರು ಪ.ಲೋ.ಬಂಕಾಪುರ.

	ಸ್ವಾತಂತ್ರ್ಯ ಪೂರ್ವದ ದಿನಗಳಿಂದಲೂ ಪತ್ರಿಕೋದ್ಯಮವನ್ನು ಒಂದು ತಪಸ್ಸು ಎಂದೇ ಸ್ವೀಕರಿಸಿ, ತಮ್ಮ ತೀಕ್ಷ್ಣಲೇಖನಿಯಿಂದ ಸುದೀರ್ಘ ಕಾಲದವರೆಗೆ ಸಮಾಜಕ್ಕೆ ಚುರುಕು ಮುಟ್ಟಿಸಿದ ಈ ಹಿರಿಯ ಚೇತನ ಸಾಗಿದ ಹಾದಿ, ಮಾಡಿರುವ ಸಾಧನೆ ಅಪಾರ. ಕರ್ನಾಟಕ ಬಂಧು, ಕರ್ಮವೀರ, ಉಷಾ, ಸ್ವಾತಂತ್ರ್ಯ, ವಿಶಾಲಕರ್ನಾಟಕ, ಪ್ರಪಂಚ, ನವಯುಗ, ಪ್ರಜಾಪ್ರಭುತ್ವ-ದೈನಿಕ, ನಿಯತಕಾಲಿಕಗಳು ಬಂಕಾಪುರ ಕಾರ್ಯ ನಿರ್ವಹಿಸಿದ ಪ್ರಕಟಣೆಗಳು. ಈ ಪೈಕಿ ವಿಶಾಲ ಕರ್ನಾಟಕ ಪತ್ರಿಕೆಗೆ ಕೆಲ ಕಾಲ ಅವರು ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದರು.

	ಆದರೆ ಅವರ ತುಡಿತವೇ ಬೇರೆ. ಸೃಜನಶೀಲ ಮನಸ್ಸು ಸದಾಕಾಲವೂ ಚಡಪಡಿಕೆಯ ಗೂಡಾಗಿರುತ್ತದೆ ಎನ್ನುವಂತೆ ಅವರು ಇತರರ ಪತ್ರಿಕೆಗಳಲ್ಲಿ ಕಾಣಲಾಗದ ವೃತ್ತಿ ಸಮಾಧಾನವನ್ನು ಕಂಡುಕೊಳ್ಳಲು ಸ್ವಂತ ಪ್ರಕಾಶನಕ್ಕೆ ಕೈ ಹಾಕಿದರು. ಬಹುಶಃ ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿಯೇ ಇನ್ನೊಬ್ಬ ಪತ್ರಕರ್ತ ಮಾಡಿರದ ಈ ಸಾಧನೆ ಈಗಲೂ ಬಂಕಾಪುರರ ಹೆಸರಿನಲ್ಲೇ ಇದೆ. 

	ನಮಗೆ ಸ್ವಾತಂತ್ರ್ಯ ಬಂದುದು 1947ರಲ್ಲಿ. ಅದೇ ವರ್ಷ ಬಂಕಾಪುರರು ಗರ್ಜನೆ ಎಂಬ ಕನ್ನಡ ಮಾಸಿಕವನ್ನು ಆರಂಭಿಸಿದರು. ಮುದವೀಡು ಕೃಷ್ಣರಾಯರು, ಅ.ನ.ಕೃಷ್ಣರಾಯರು, ಬೀಚಿ, ಬೆಟಗೇರಿ ಕೃಷ್ಣಶರ್ಮ, ಶ್ರೀರಂಗ, ಚನ್ನವೀರ ಕಣವಿ, ಎಸ್.ಎಸ್.ಒಡೆಯರ್ ಮುಂತಾದವರು ಗರ್ಜನೆಯಲ್ಲಿ ನಿಯಮಿತವಾಗಿ ಬರೆಯುತ್ತಿದ್ದರು ಎನ್ನುವುದು ಬಂಕಾಪುರ ಅವರಿಗಿದ್ದ ಸಾಹಿತ್ಯ ಸಂಬಂಧದ ಅಗಲ-ಆಳಕ್ಕೆ ನಿದರ್ಶನ. 	ಕನ್ನಡಿಗರ ದುರ್ದೈವ. ಗರ್ಜನೆ ಎರಡೇ ವರ್ಷದಲ್ಲಿ ಉಡುಗಿಹೋಯಿತು. ಬಂಕಾಪುರರು ಇದರಿಂದೇನೂ ಧೃತಿಗೆಡಲಿಲ್ಲ. ಸಿಡಿಲು ದೈನಿಕ ಆರಂಭಿಸಿದರು. ರಂಜನೆ ಸಾಪ್ತಾಹಿಕ, ಅವರ ಮತ್ತೊಂದು ಕೊಡುಗೆ. ಐವತ್ತರ ದಶಕ ಇಪ್ಪತ್ತನೆ ಶತಮಾನದ ಭಾಷೆ ಎಂದೇ ಕರೆಸಿಕೊಂಡ ಸಿನಿಮಾ ಮಾಧ್ಯಮ ಹುರುಪುಗೊಳ್ಳುತ್ತಿದ್ದ ದಿನಮಾನವದು. ನಾಗರಿಕ ಸಮಾಜದ ಅವಿಭಾಜ್ಯ ಅಂಗವಾಗಿ ಬೆಳೆಯುತ್ತಿದ್ದ ಸಿನಿಮಾ ಕುರಿತು ವಸ್ತುನಿಷ್ಠ ಮಾಹಿತಿ ನೀಡುವ ಉದ್ದೇಶದ ಚಿತ್ರಾ ಸಿನಿಮಾ ಮಾಸಿಕವನ್ನು ಬಂಕಾಪುರ 1952ರಲ್ಲಿ ಆರಂಭಿಸಿದರು. ಗದಗ ಹಾಗೂ ಮುಂಬೈನಿಂದ ಏಕಕಾಲಕ್ಕೆ ಪ್ರಕಟವಾಗುತ್ತಿದ್ದ ಇದು ಸಿನಿಮಾ ವರದಿಯ ಹೊಸ ಆಯಾಮವೊಂದರ ಉದಯಕ್ಕೆ ವೇದಿಕೆಯಾಯಿತು. ಪ್ರಾರಬ್ಧ, ನೇಕಾರಿಕೆ, ಸರ್ವಜ್ಞ ಎಂಬ ಪತ್ರಿಕೆಗಳನ್ನೂ ಬಂಕಾಪುರ ಆರಂಭಿಸಿದರು. ಈ ಎಲ್ಲದರ ಪ್ರತಿಫಲವಾಗಿ ಅವರಿಗೆ ಸಿಕ್ಕಿದ್ದು ಬಡತನ. ಆದರೆ ಪತ್ರಿಕೋದ್ಯಮವನ್ನು ಆದಾಯ ಮೂಲ ಎಂದು ಎಂದೂ ಭಾವಿಸದ ಬಂಕಾಪುರರು ಇತರರು ಅನುಸರಿಸಲು ಕಷ್ಟವಾದ ದುರ್ಗಮ ಪಥವನ್ನೇ, ಉದ್ದಕ್ಕೂ ತುಳಿದವರು. ಕರ್ನಾಟಕ ಸರಕಾರ ರಾಜ್ಯೋತ್ಸವ ಪ್ರಶಸ್ತಿ (1973), ಪತ್ರಿಕೋದ್ಯಮ ಪ್ರಶಸ್ತಿ (1993) ಮತ್ತು ಟೀಯೆಸ್ಸಾರ್ ಪ್ರಶಸ್ತಿ (1996) ನೀಡಿ ಗೌರವಿಸಿದೆ. ಬಂಕಾಪುರ ಅವರು 2003ರ ಜನವರಿ 5ರಂದು ನಿಧನ ಹೊಂದಿದರು.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ